ಅಂಧರಿಗಾಗಿ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳು ಮೊದಲ ಬಾರಿಗೆ ಉದ್ಯೋಗಕ್ಕೆ ಸೇರಿದ ನಂತರ ಜಗನ್ನಾಥ ಸಿಂಗ್ ಜಯರಾ ಅವರಿಗೆ ಸಿಹಿತಿಂಡಿಗಳನ್ನು ನೀಡಿ ಕೃತಜ್ಞತೆ ಸಲ್ಲಿಸಿದ್ದು ಅವರಿಗೆ ಸಂದ ದೊಡ್ಡ ಗೌರವವಾಗಿದೆ. ಉತ್ತರಾಖಂಡದ ದೃಷ್ಟಿಹೀನ ಶಾಲಾ ವಿದ್ಯಾರ್ಥಿಯಿಂದ ಚಂಡೀಗಢದ ಈ ಶಾಲೆಯ ರಾಜ್ಯ ಪ್ರಶಸ್ತಿ ವಿಜೇತ ಪ್ರಾಂಶುಪಾಲರವರೆಗಿನ ಪ್ರಯಾಣವನ್ನು ಅವರು ನೆನಪಿಸಿಕೊಂಡಿದ್ದಾರೆ.
ಜಗನ್ನಾಥ್ ಅವರು 1963 ರಲ್ಲಿ ಪರ್ವತ ಗರ್ಹ್ವಾಲ್ ಜಿಲ್ಲೆಯ ಪುರೋಲಾ ಬಳಿಯ ಹಳ್ಳಿಯಲ್ಲಿ ಜನಿಸಿದರು. ಆರು ತಿಂಗಳಿರುವಾಗಲೇ ಅವರು ಕ್ಷಯರೋಗದಿಂದ ತಾಯಿಯನ್ನು ಕಳೆದುಕೊಂಡರು. ಅ��ರನ್ನು ಬೆಳೆಸಿದ ತಂದೆ ಮತ್ತು ಅವನ ಅಜ್ಜಿ ಅವರನ್ನು ಓದಲು ಪ್ರೋತ್ಸಾಹಿಸಿದರು. ಅವರ ದೃಷ್ಟಿ ಕ್ಷೀಣಿಸುತ್ತಲೇ ಇತ್ತು ಮತ್ತು ಅವರು ಆರನೇ ತರಗತಿಯನ್ನು ತಲುಪಿದಾಗ ಓದಲು ಸಾಧ್ಯವಾಗಲಿಲ್ಲ. ಆದ್ದರಿಂದ ಅವರು ತಮ್ಮ ಪಠ್ಯಪುಸ್ತಕಗಳ ಸಂಪೂರ್ಣ ಅಧ್ಯಾಯಗಳನ್ನು ನೆನಪಿಟ್ಟುಕೊಳ್ಳಲು ಮುಂದಾದರು. ಅವರು ತಮ್ಮ ಬೆಂಬಲಿಗ ಶಿಕ್ಷಕರು ಮತ್ತು ಅವರ ಸಹಪಾಠಿಗಳ ನಡವಳಿಕೆಯ ಬಗ್ಗೆ ಪ್ರೀತಿಯಿಂದ ಮಾತನಾಡುತ್ತಾರೆ. "ವಾಲಿಬಾಲ್ ಆಡುವಾಗ ನನ್ನ ಸಹಪಾಠಿಗಳು ನನಗೆ ಹೊಡೆಯಲು ಚೆಂಡನ್ನು ಕೊಡುತ್ತಿದ್ದರು ಏಕೆಂದರೆ ಅದು ಗಾಳಿಯಲ್ಲಿದ್ದಾಗ ನಾನು ಅದನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ" ಎನ್ನುತ್ತಾರೆ.
ಇಂಗ್ಲಿಷ್ ಮತ್ತು ಶಿಕ್ಷಣದಲ್ಲಿ ಎರಡು ಸ್ನಾತಕೋತ್ತರ ಪದವಿಗಳನ್ನು ಪಡೆದ ನಂತರ, ವಿಶೇಷ ಶಿಕ್ಷಣದಲ್ಲಿ ಡಿಪ್ಲೊಮಾವನ್ನು ಗಳಿಸಿದರು. ಚಂಡೀಗಢಕ್ಕೆ ತೆರಳುವ ಮೊದಲು ಡೆಹ್ರಾಡೂನ್‌ನಲ್ಲಿರುವ ದೃಷ್ಟಿಹೀನರ ರಾಷ್ಟ್ರೀಯ ಸಂಸ್ಥೆಯಲ್ಲಿ ಜಯರಾ ಬೋಧಕರಾಗಿದ್ದರು. ಅವರು ತಮ್ಮ 'ಗುರೂಜಿ' ಪ್ರೊಫೆಸರ್ ರಘುರಾಜ್ ಸಿಂಗ್ ಅವರನ್ನು ಸದಾ ಗೌರವಿಸುತ್ತಾರೆ. ಅವರು ಜಯರಾ ಅವರಿಗೆ ಸ್ಫೂರ್ತಿಯಾಗಿದ್ದಾರೆ ಮತ್ತು ದೃಷ್ಟಿಹೀನ ವಿದ್ಯಾರ್ಥಿಗಳಿಗೆ ಅಂಕ ಹೆಚ್ಚು ಪಡೆಯುವಲ್ಲಿ ಶ್ರಮವಹಿಸಿದ್ದಾರೆ. ಜಯಾರ ಅವರು ಸ್ವತಂತ್ರರಾಗಿ ಇತರರಿಗೆ ಮಾದರಿಯಾಗಬೇಕೆಂಬ ಹಂಬಲವನ್ನು ಸದಾ ರೂಢಿಸಿಕೊಂಡು ಬಂದವರು. ಅವರು ಹಿಂದಿಯಲ್ಲಿ ಒಂದು ಪ್ರಾಸವನ್ನು ಹೀಗೆ ಅನುವಾದಿಸುತ್ತಾರೆ: “ನೀವು ಗುರುತನ್ನು ರಚಿಸುವ ಹಾಗೆ ಕೆಲಸ ಮಾಡಿ. ನೀವು ಗುರುತು ಬಿಡುವಂತೆ ನಡೆಯಿರಿ. ನೀವು ಪರಂಪರೆಯನ್ನು ರಚಿಸುವ ರೀತಿಯಲ್ಲಿ ಬದುಕಿ"
ವಾಸ್ತವವಾಗಿ ಜಯರಾ ಅವರು ಒಳ್ಳೆಯ ಪ್ರಾಸಗಾರ. "ನನಗೆ ಮೂವರು ಸುಂದರ ಹೆಣ್ಣುಮಕ್ಕಳಿದ್ದಾರೆ" ಎಂದು ಅವರ ಇಂಗ್ಲಿಷ್ ಪದ್ಯಗಳಲ್ಲಿ ಒಂದು ಪ್ರಾರಂಭವಾಗುತ್ತದೆ. “ಅವರ ಹೆಸರುಗಳು ಸ್ವೀಟಿ, ಪ್ರೆಟಿ ಮತ್ತು ಬ್ಯೂಟಿ. ಅವರು UT (ಕೇಂದ್ರಾಡಳಿತ ಪ್ರದೇಶ ಅಂದರೆ ಚಂಡೀಗಢ) ನಲ್ಲಿ ವಾಸಿಸುತ್ತಿದ್ದಾರೆ. ಅವರನ್ನು ನೋಡಿಕೊಳ್ಳುವುದು ನನ್ನ ಕರ್ತವ್ಯ." "ನನ್ನ ಉತ್ತಮ ಅರ್ಧಾಂಗಿ ಹಳೆಯದು ಆದರೆ ಇನ್ನೂ ತುಂಬಾ ಮೋಹನಾಂಗಿ" ಎಂದು ಪದ್ಯ ಕೊನೆಗೊಳ್ಳುತ್ತದೆ!
ಜಯರಾ ಅವರ ವಿದ್ಯಾರ್ಥಿಗಳೂ ಅವರ ವಚನ ಸಾಹಿತ್ಯದ ಲಾಭವನ್ನು ಪಡೆದಿದ್ದಾರೆ. ನೀತಿ, ಪ್ರೀತಿ ಮತ್ತು ಸರಸ್ವತಿಯ ಮೇಲೆ ಕೇಂದ್ರೀಕರಿಸಲು ಅವರು ಅವರಿಗೆ ಹೇಳುತ್ತಾರೆ: ನೈತಿಕ ತತ್ವಗಳು, ಪ್ರೀತಿಯ ವರ್ತನೆ ಮತ್ತು ಜ್ಞಾನ ಮತ್ತು ಪ್ರತಿಯೊಬ್ಬರೂ ಆನಂದದಿಂದಿರಬೇಕು ಎಂದು ಅವರು ನಂಬುತ್ತಾರೆ. ಏಕೆಂದರೆ ನೀವು ಸಂತೋಷದಲ್ಲಿ ವ್ಯಾಪಾರ ಮಾಡುವಾಗ ನಿಮ್ಮ ಸಂಪತ್ತು ಅದನ್ನು ಹಂಚಿಕೊಂಡರೆ ಇನ್ನೂ ಹೆಚ್ಚುತ್ತದೆ.