Icon to view photos in full screen

"ಮೊದಲಿಗೆ ಅಂಗವಿಕಲತೆ ಎನ್ನುವುದೇ ನನ್ನ ದೌರ್ಬಲ್ಯವಾಗಿತ್ತು. ಆದರೆ, ಅದೇ ಈಗ ನನ್ನ ಶಕ್ತಿಯಾಗಿದೆ ಎನ್ನುವುದು ನಾಗಾಲ್ಯಾಂಡ್‍ನ ಆಶೆ ಕಿಬಾ ಎಂಬ ಯುವತಿಯ ಮಾತು."

ಹರ್ಷ ಚಿತ್ತಳಾಗಿ, ಉತ್ಸಾಹದಿಂದ ಇರುವ ಆಶೆ ಕಿಬಾಳನ್ನು ಇಂದು ಭೇಟಿ ಮಾಡಬಹುದು.ಈಗಇಷ್ಟೆಲ್ಲ ಖುಷಿಯಿಂದಿರುವ ಹುಡುಗಿ, ಬಾಲ್ಯದಿಂದಲೂ ಎಷ್ಟೆಲ್ಲ ನೋವುಗಳನ್ನುಅನುಭವಿಸಿರಬಹುದು, ಮಗುವಾಗಿದ್ದಾಗ ಎಷ್ಟೆಲ್ಲ ನಾಚಿಕೆ-ಸಂಕಷ್ಟದಿಂದ ಮುದುಡಿರಬಹುದುಎಂದು ನಮಗೆ ಊಹಿಸಲೂ ಕಷ್ಟವಾಗುತ್ತದೆ. ನಾಗಾಲ್ಯಾಂಡ್‍ನ ಅಕುಲುಟೊ ಪಟ್ಟಣದಲ್ಲಿ ಬೆಳೆದಕಿಬಾ ಜನರ ಮಧ್ಯೆ ವಿಚಿತ್ರವಾಗಿ ಕಾಣುತ್ತಿದ್ದಳು. ಇತರರಿಗೆ ಹೋಲಿಸಿದರೆ ಅವಳ ಕೈಗಳುಬಹಳ ಪುಟ್ಟದಾಗಿದ್ದವು. ಬೆರಳುಗಳು ಒಂದಕ್ಕೊಂದು ಅಂಟಿಕೊಂಡಿದ್ದವು. ಅವಳ ಕೈಗಳನ್ನುನೋಡಿ ಅನೇಕರು ಜುಗುಪ್ಸೆಗೊಳ್ಳುತ್ತಿದ್ದರು. ವಿಚಿತ್ರವಾಗಿ ನಡೆದುಕೊಳ್ಳುತ್ತಿದ್ದರು.ಒಂದು ಸಲ ಔಷಧ ಖರೀದಿಸಲು ಅಂಗಡಿಗೆ ತೆರಳಿದ ಕಿಬಾ, ಹಣವನ್ನು ಕೊಟ್ಟಳು. ಆಗ ಅವಳಕೈಯನ್ನು ಗಮನಿಸಿದ ಅಂಗಡಿ ಮಾಲೀಕ, ಹಣವನ್ನು ಅವಳತ್ತ ಎಸೆದಿದ್ದನು.

ಸಿಂಡ್ರೆಲಾ ಥರಾ ತನಗೂ ಒಬ್ಬ ದೇವತೆ ಸಿಕ್ಕಿ, ತನ್ನ ಕೈಗಳನ್ನು ಮಾಮೂಲಿನಂತೆ ಮಾಡಿದರೆಸಾಕು ಎಂದು ಬಾಲ್ಯದಲ್ಲಿ ಪುಟಾಣಿ ಕಿಬಾ ಬಯಸುತ್ತಿದ್ದಳು. ತನ್ನ ವಿಕಲ ಕೈಗಳನ್ನುಉದ್ದೇಶಪೂರ್ವಕವಾಗಿಯೇ ಆಕೆ ಮರೆ ಮಾಚುತ್ತಿದ್ದಳು. ಶಾಲೆಯಲ್ಲಿ ತ್ರೋಬಾಲ್ ಸೇರಿದಂತೆನಾನಾ ಆಟಗಳಲ್ಲಿ ಪಾಲ್ಗೊಳ್ಳುವ ಆಸೆ ಅವಳಿಗೆ ಇತ್ತು. ಆದರೆ, ಅವಕಾಶ ಸಿಗದೇಪ್ರೇಕ್ಷಕರ ಗ್ಯಾಲರಿಯಲ್ಲಿ ಕೂರುತ್ತಿದ್ದಳು. ಶಾಲೆಯಲ್ಲಿ ಮಧ್ಯಾಹ್ನದ ಊಟದ ಸಮಯದಲ್ಲಿಸಹಪಾಠಿಗಳ ಜೊತೆ ಆಕೆ ಸೇರುತ್ತಿರಲಿಲ್ಲ. ಕೆಲವು ಸಲ ಊಟವನ್ನೇ ಮಾಡುತ್ತಿರಲಿಲ್ಲ.ಏಕೆಂದರೆ, ತನ್ನ ಲಂಚ್ ಬಾಕ್ಸ್ ತೆರೆಯುವಾಗ ಅವಳ ಕೈಗಳನ್ನು ಸಹಪಾಠಿಗಳು ವಿಚಿತ್ರವಾಗಿಮತ್ತು ಭಯದಿಂದ ನೋಡುತ್ತಿದ್ದರು. ಇದೇ ಕಾರಣದಿಂದ ಜನ ಸೇರುವ ಕಾರ್ಯಕ್ರಮಗಳಳ್ಳಿಪಾಲ್ಗೊಳ್ಳುವುದನ್ನೂ ಆಕೆ ಬೇಕೆಂದೇ ತಪ್ಪಿಸುತ್ತಿದ್ದಳು.

ತನ್ನ ಕೈಗಳು ಉಳಿದವರ ಕೈಗಳಂತೆ ಇಲ್ಲ ಎಂಬ ಒಂದೇ ಕಾರಣಕ್ಕೆ ಕಿಬಾ, ಶಿಕ್ಷಕರು ಮತ್ತುವಿದ್ಯಾರ್ಥಿಗಳಿಂದ ನಾನಾ ಬಗೆಯ ಕಿರುಕುಳಕ್ಕೆ ತುತ್ತಾಗಬೇಕಾಯಿತು. ಇದರಿಂದಾಗಿ ಆಕೆನಿರುತ್ಸಾಹ ಮತ್ತು ಖಿನ್ನತೆಗೆ ಒಳಗಾಗುತ್ತಿದ್ದಳು. ಒಂದು ಸಲವಂತೂ ಆತ್ಮಹತ್ಯೆಮಾಡಿಕೊಳ್ಳಲು ಮುಂದಾಗಿದ್ದಳು. ಹೈಸ್ಕೂಲ್ ಮುಗಿದ ಮೇಲೆ 5 ವರ್ಷ ಓದಿನಿಂದ ದೂರಉಳಿದಳು. ಆದರೆ, ಅವರ ತಾಯಿ ಯೆಹೋಲಿ ತ್ಸುಕು ಮಗಳನ್ನು ಎಚ್ಚರಿಸುತ್ತಲೇ ಇದ್ದರು.“ಶಿಕ್ಷಣ ಇಲ್ಲದೇ, ನೀನು ಏನನ್ನೂ ಮಾಡಲಾರೆ,’’ ಎನ್ನುವ ಅಮ್ಮನ ಮಾತುಗಳು ಕಿವಿಯಲ್ಲಿಉಳಿದಿದ್ದವು. ಹೀಗಾಗಿ ಶಿಕ್ಷಣದತ್ತ ಸೆಳೆತ ಬಂತು. ಆಂಗ್ಲ ಸಾಹಿತ್ಯದಲ್ಲಿ ಪದವಿಯನ್ನುಪಡೆದಳು. ಡಿಂಪುರ್‍ನ ಪ್ರಭಾನಂದ ಮಹಿಳಾ ಕಾಲೇಜಿನಲ್ಲಿ ಆಕೆ ಪದವಿ ಜತೆಆತ್ಮವಿಶ್ವಾಸವನ್ನೂ ಗಳಿಸಿದಳು.

ಅಂದಹಾಗೆ, ಆಕೆಯ ಜೀವನದಲ್ಲಿ ಆ ಒಂದು ಕಹಿ ಅನುಭವ ಆಗದೇ ಹೋಗಿದ್ದರೆ, ಆಕೆ ಜನರ ಕರುಣೆಬೇಡುತ್ತಾ ಕಹಿ ನೆನಪುಗಳೊಂದಿಗೆ ತನ್ನ ಪೂರ್ತಿ ಜೀವನವನ್ನು ಕಳೆಯಬೇಕಾಗಿತ್ತು.ಖೆಹುಟೊ ಗ್ರಾಮದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸ್ಥಾನಕ್ಕೆ ಕಿಬಾ ಹೆಸರು ಬಂದಾಗ,ಕೆಲವರು ಆಕ್ಷೇಪ ವ್ಯಕ್ತಪಡಿಸಿದರು. ಸಂಘದ ಸಭೆಯಲ್ಲಿ ಅವರ ಚಿಕ್ಕಪ್ಪನೇ ತಕರಾರುತೆಗೆದ. “ಈಕೆ ಏನಾದರೂ ಅಧ್ಯಕ್ಷ ಸ್ಥಾನಕ್ಕೆ ಚುನಾಯಿತಳಾದರೆ ನಮ್ಮ ಗ್ರಾಮಕ್ಕೆಅವಮಾನವಾಗುತ್ತದೆ. ಅಂಗವಿಕಲೆ,ಅದೂ ಒಬ್ಬ ಮಹಿಳೆ ಅಧ್ಯಕ್ಷ ಸ್ಥಾನ ಏರಿದರೆ ಅದರಿಂದಏನಾದರೂ ಉಪಯೋಗವಿದೆಯೇ?’’ ಎಂದು ಪ್ರಶ್ನಿಸಿದ್ದ. ಆ ಘಟನೆಯ ಬಳಿಕ ಕಿಬಾ ಬದಲಾದಳು.ತನ್ನನ್ನು ಹೀಯಾಳಿಸುವ ಸಮಾಜಕ್ಕೆ ಸಾಧನೆಯ ಮೂಲಕವೇ ಉತ್ತರ ನೀಡಲು ನಿರ್ಧರಿಸಿದಳು.ತನ್ನಂತೆಯೇ ಅಂಗವೈಕಲ್ಯವುಳ್ಳವರ(ಪಿಡಬ್ಲ್ಯುಡಿ - ಪರ್ಸನ್ ವಿತ್ ಡಿಸಬಿಲಿಟಿ) ಪರವಾಗಿಧ್ವನಿ ಎತ್ತಲು ಮುಂದಾದಳು.

2015ರ ಜ.1ರಂದು ತನಗೆ ತಾನೇ ಪ್ರಾಮಿಸ್ ಮಾಡಿಕೊಂಡಳು. ತನ್ನ ಕೈಂಕರ್ಯ ಮತ್ತುಹೊಣೆಗಾರಿಕೆಗೆ ಬದ್ಧಳಾಗಿರಲು ನಿರ್ಧರಿಸಿದಳು. ನಿಧಾನವಾಗಿ ತನ್ನಲ್ಲಿನಹಿಂಜರಿಕೆಯನ್ನು ಬಿಟ್ಟು, ಧೈರ್ಯದ ಮನಸ್ಥಿತಿ ರೂಪಿಸಿಕೊಂಡಳು. ನಾಗಾಲ್ಯಾಂಡ್ ರಾಜ್ಯದವಿಶೇಷಚೇತನರ ಸಂಸ್ಥೆಯು(ಎನ್‍ಎಸ್‍ಡಿಎಫ್) ಕಿಬಾಳನ್ನು ಗುರುತಿಸಿತು. ಗುವಾಹಟಿಯಲ್ಲಿಪಿಡಬ್ಲ್ಯುಡಿಗಳ ಸೆಮಿನಾರಿನಲ್ಲಿ ಪಾಲ್ಗೊಳ್ಳಲು ಕಿಬಾಗೆ ಅವಕಾಶ ನೀಡಿತು. ಬಳಿಕ2017ರಲ್ಲಿ ಪುಣೆಯ ಪಂಚಗಣಿಯಲ್ಲಿ ಟಾಟಾ ಸ್ಟೀಲ್ ಆಯೋಜಿಸಿದ್ದ ಬುಡಕಟ್ಟುವಾಸಿಗಳನಾಯಕತ್ವ ಕಾರ್ಯಕ್ರಮದ ವೇದಿಕೆಯಲ್ಲಿ ಮೊದಲ ಸಲ ತನ್ನ ಕತೆಯನ್ನು ಕಿಬಾ ಹೇಳಿಕೊಂಡಳು.2018ರಲ್ಲಿ ಮತ್ತೆ ಟಿಎಲ್‍ಪಿಯಲ್ಲಿ(ಟಾಟಾ ಸ್ಟೀಲ್‍ನ ಟ್ರೈಬಲ್ ಲೀಡರ್ ಶಿಪ್ಪ್ರೋಗ್ರಾಮ್) ಆಕೆ ಭಾಷಣ ಮಾಡಿದಳು. ಆ ಕಾರ್ಯಕ್ರಮದಲ್ಲಿ ಮೊದಲ ಸಲ ತನ್ನ ತೋಳು ಮತ್ತುಕೈಗಳನ್ನು ಸಾರ್ವಜನಿಕವಾಗಿ ಹೆಮ್ಮೆಯಿಂದ ತೋರಿಸಿದಳು!

ಈ ಐತಿಹಾಸಿಕ ಕಾರ್ಯಕ್ರಮಗಳ ಬಳಿಕ ಆಕೆ ಮಾನಸಿಕವಾಗಿ ಇನ್ನಷ್ಟು ದೃಢಳಾದಳು. ಪ್ರಸ್ತುತಕಿಬಾ ಎನ್‍ಎಸ್‍ಡಿಎಫ್‍ನ ಪ್ರಧಾನ ಕಾರ್ಯದರ್ಶಿ. ಅಲ್ಲದೇ ವಿಶೇಷಚೇತನರ ಸಂಘಟನೆಗಳಲ್ಲಿನಾನಾ ಜವಾಬ್ದಾರಿಯುತ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸುತ್ತಿದ್ದಾಳೆ. ಬಿಡುವಿನವೇಳೆಯಲ್ಲಿ ಟಿವಿಯಲ್ಲಿ ಡಿಸ್ನಿ ಕತೆಗಳನ್ನು ನೋಡುತ್ತಾಳೆ. ಸ್ಥಳೀಯ ಅಪ್ಲೋನೊಗಾಸ್ಪೆಲ್ ಬ್ಯಾಂಡ್‍ನ ಸಂಗೀತಕ್ಕೆ ಕಿವಿ ಕೊಡುತ್ತಾಳೆ. ತನ್ನ ಗೆಳತಿಯೊರೊಂದಿಗೆ ಕಾಲಕಳೆಯುತ್ತಾಳೆ.

“ಯಾವಾಗಲೂ ಬಹಳ ಧೈರ್ಯದಿಂದ ಬದುಕಿ. ಭಯವನ್ನು ಬಿಟ್ಟು ಬಿಡಿ,’’ ಎನ್ನುವ ಸಂದೇಶವನ್ನುಅಂಗವೈಕಲ್ಯವುಳ್ಳವರಿಗೆ ಕಿಬಾ ನೀಡಿದ್ದಾಳೆ. “ನಿಮ್ಮ ದೌರ್ಬಲ್ಯವನ್ನು ಒಪ್ಪಿಕೊಳ್ಳಿ.ಅದನ್ನು ಜನರು ಮತ್ತು ಸಮಾಜದಿಂದ ಮುಚ್ಚಿಡುವ ಪ್ರಯತ್ನ ಮಾಡಬೇಡಿ,’’ ಎಂದೂ ಕಿವಿಮಾತುಹೇಳಿದ್ದಾಳೆ.

Photos:

Vicky Roy